ಶ್ರೀಸುಶಮೀಂದ್ರವಾಣಿ
ಸ್ವರ್ಣಂ
ಯಥಾ ಗ್ರಾವಸು ಹೇಮಕಾರಃ ಕ್ಷೇತ್ರೇಷು ಯೋಗೈಸ್ತದಭಿಜ್ಞ ಆಪ್ನುಯಾತ್ |
ಕ್ಷೇತ್ರೇಷು ದೇಹೇಷು ತಥಾತ್ಮಯೋಗೈಃ ಆಧ್ಯಾತ್ಮವಿದ್ಭೃಹ್ಯಗತಿಂ ಲಭೇತ್ || -
ಭಾಗವತ : ಸುವರ್ಣವನ್ನು ಸಂಪಾದಿಸುವ ಸಮರ್ಥನಾದ ಅಕ್ಕಸಾಲಿಗನು
ಕಲ್ಲಿನ ನೆಲದಲ್ಲಿ ತನ್ನ ವಿಶೇಷ ಪ್ರಜ್ಞೆಯಿಂದ ಹೇಗೆ ಚಿನ್ನವನ್ನು ಪಡೆಯುವನೋ,
ಹಾಗೆ ಆತ್ಮನಿಷ್ಠನು ಈ ದೇಹದಲ್ಲಿ ಆಧ್ಯಾತ್ಮ ಮಾರ್ಗಗಳಿಂದ ಬ್ರಹ್ಮಜ್ಞಾನವನ್ನು
ಪಡೆಯುತ್ತಾನೆ. ಇಂತಹ ಆಧ್ಯಾತ್ಮಪ್ರಬೋಧಕ ಪ್ರಾಚೀನಗ್ರಂಥಗಳು ಅನೇಕರ ಮನೆಯಲ್ಲಿ
ಓದುವವರಿಲ್ಲದೆ ಹಾಳಾಗುತ್ತಿವೆ. ಅಂತಹ ಗ್ರಂಥಗಳು ಸರ್ವರಿಗೂ ಸಿಗುವಂತೆ ಮಾಡಲು
ಅವುಗಳನ್ನು ಪ್ರಾಚೀನ ವಿದ್ಯಾಸಂಸ್ಥೆಗಳಿಗೆ ದಾನ ಮಾಡುವುದು ಧರ್ಮಕಾರ್ಯ.